image

ರ್ನಾಟಕ ಏಕೀಕರಣಗೊಂಡ 50 ವರ್ಷಗಳು ತುಂಬಿರುವ ಸವಿನೆನಪಿಗಾಗಿ ಕರ್ನಾಟಕ ಸರ್ಕಾರವು ಸುವರ್ಣ ಕರ್ನಾಟಕದ ವಾರ್ಷಿಕೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಆಚರಿಸಿದೆ. ಪ್ರಸಕ್ತ ಸರ್ಕಾರಿ ಆದೇಶ ಸಂಖ್ಯೆ:ಕಸಂವಾಪ್ರ:112 ಕರಅ 2008, ಬೆಂಗಳೂರು, ದಿನಾಂಕ:19-09-2008 ರಂದು, ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸಲು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ವಿವಿಧ ಇಲಾಖಾ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಬೆಳಗಾವಿ ಜಿಲ್ಲೆಯು ಕರ್ನಾಟಕದ ಪ್ರಮುಖ ಸಂಸ್ಕೃತಿಕ ಹಾಗೂ ಐತಿಹಾಸಿಕ ಸ್ಥಳವಾಗಿದ್ದು ಇಂತಹ ವೈಶಿಷ್ಟ್ಯಪೂರ್ಣ ಸ್ಥಳದಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಕಳೆದ 54 ವರ್ಷಗಳಲ್ಲಿ ಕರ್ನಾಟಕ ರಾಜ್ಯ ತನ್ನ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಸಿಂಹಾವಲೋಕನ ಹಾಗೂ ಮುಂದೆ ಸಾಧಿಸಬೇಕಾದ ಕಾರ್ಯಗಳ ಮುನ್ನೋಟದ ಬಗ್ಗೆ ಯೋಜಿಸುವದು ಈ ವಿಶ್ವ ಕನ್ನಡ ಸಮ್ಮೇಳನದ  ಉದ್ದೇಶವಾಗಿದೆ.
ವಿಶ್ವ ಕನ್ನಡ ಸಮ್ಮೇಳನವು 11, 12 ಮತ್ತು 13 ಮಾರ್ಚ-2011ರಲ್ಲಿ ಜರುಗಲಿದೆ.

 
Share |
ವೀಕ್ಷಕರ ಸಂಖ್ಯೆ : a

ಮಾಹಿತಿ ಪ್ರಕಟಣೆ : ವಿಶ್ವ ಕನ್ನಡ ಸಮ್ಮೇಳನ ವಿಭಾಗ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ.
ವಿನ್ಯಾಸ   :ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಬೆಳಗಾವಿ.