ಪ್ರವಾಸೋದ್ಯಮ

ಹರಿಯುವ ನದಿಗಳು, ಮೋಡಿಮಾಡುವಂತಹ ಬೆಟ್ಟಗಳು ಹಾಗೂ ದಟ್ಟವಾದ, ನಿತ್ಯಹರಿದ್ವರ್ಣವಾದ ಕಾಡುಗಳು ಇವುಗಳನ್ನೆಲ್ಲ ಊಹಿಸಿದರೆ ಮೈ ಪುಳುಕಿತಗೊಳ್ಳುತ್ತದೆ. ಈ ಸೊಬಗೆಲ್ಲ ಈ ತಂಪಾದ ಬೆಳಗಾವಿಯಲ್ಲಿದೆ. ಇಲ್ಲಿರುವ ಪಶ್ಚಿಮ ಘಟ್ಟದ ಪರ್ವತಗಳು ಇಲ್ಲಿನ ಸುಂದರತೆಗೆ ಹಿನ್ನೆಲೆಯಾಗಿದೆ. ಈ ಜಿಲ್ಲೆಯು ಬೆಂಗಳೂರಿನಿಂದ 502 ಕಿ.ಮೀ. ಅಂತರದಲ್ಲಿದ್ದು, ಗೋವಾದಿಂದ 125 ಕಿ.ಮೀ. ದೂರದಲ್ಲಿದೆ. ರೇಷ್ಟೆ ಹಾಗೂ ಹತ್ತಿಯ ನೇಕಾರಿಕೆ ಇಲ್ಲಿ ಇರುವುದಲ್ಲದೆ, ಬೆಳಗಾವಿ ಕೋಟೆಯಿಂದ ಹೊರಬಂದರೆ, ಸುಮಾರು ದೇವಸ್ಥಾನಗಳು, ಚರ್ಚ್‍ಗಳಿಗೆ, ಐತಿಹಾಸಿಕ ಕೋಟೆ, ಕಮಲಬಸ್ತಿ, ದಕ್ಷಿಣದ ಕಾಶಿ ಎಂದು ಹೆಸರು ವಾಸಿಯಾದ ಕಪಿಲೇಶ್ವರ ದೇವಸ್ಥಾನ, ವೈಜನಾಥ ಬೆಟ್ಟ, ರಾಮತೀರ್ಥ ಇತ್ಯಾಧಿ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ. ಉತ್ತರ ಕರ್ನಾಟಕಕ್ಕೆ ನೀವು ಪ್ರವಾಸ ಬಯಸಿದ್ದಲ್ಲಿ ಬೆಳಗಾವಿಯಿಂದ ಪ್ರವಾಸ ಪ್ರಾರಂಭಿಸಿದರೆ ಉತ್ತಮ.

ಬೆಳಗಾವಿ ಬಗ್ಗೆ ಹೆಚ್ಚು ತಿಳಿಯಲು .......

ತಲುಪುವ ಬಗೆ

ಪ್ರವಾಸಿಗರ ಆಕರ್ಷಣಿಯ ಸ್ಥಳ ಗಳು

ವಸತಿ ಸೌಲಭ್ಯಗಳು

 

Best Viewed in latest version of firefox,chrome, Internet Explorer 9 or above with resolution 1024x768.