ಇತರೆ ಆರೋಗ್ಯ ಸಂಸ್ಥೆಗಳು

 

ಜಿಲ್ಲಾ ಆಸ್ಪತ್ರೆ ಬೆಳಗಾವಿ:  ಈಗಿನ ಜಿಲ್ಲಾ ಆಸ್ಪತ್ರೆ ಬೆಳಗಾವಿಯು 1859 ಕ್ಕಿಂತ ಮುಂಚೆ ಸಾರ್ವಜನಿಕ ಆಸ್ಪತ್ರೆ ಎಂದು ಪ್ರಸಿದ್ದಿಯನ್ನು ಹೊಂದಿತ್ತು. ಆಸ್ಪತ್ರೆಯು ಜಿಲ್ಲೆಯ ರೋಗಿಗಳು ಸೇರಿದಂತೆ ನೆರೆಯ ರಾಜ್ಯಗಳ ಗಡಿಭಾಗದ ಹಳ್ಳಿಯ ಜನರಿಗೂ ಆರೋಗ್ಯ ಸೌಲಭ್ಯ ಒದಗಿಸುತ್ತಿದೆ. ಜವಾಹರಲಾಲ್ ವೈದ್ಯಕೀಯ ಮಹಾವಿದ್ಯಾಲಯವನ್ನು ಆಸ್ಪತ್ರೆಗೆ ಸಂಯೋಜಿಸಲಾಗಿದೆ. ಪ್ರಸ್ತುತ ಆಸ್ಪತ್ರೆಯು 1000 ಹಾಸಿಗೆ ಸಾಮರ್ಥ್ಯವನ್ನು ಹೊಂದಿದ್ದು ವಿಶೇಷ ಸೇವೆಗಳಾದ ಔಷದಿ, ಶಸ್ತ್ರಚಿಕಿತ್ಸೆ, ಚಿಕ್ಕಮಕ್ಕಳ ಆರೈಕೆ, ಪ್ರಸೂತಿ ಹಾಗೂ ಸ್ತ್ರೀ ರೋಗ ಚಿಕಿತ್ಸೆ ಕಿವಿ, ಮೂಗು, ಹಾಗೂ ಗಂಟಲು ಚಿಕಿತ್ಸೆ, ಚರ್ಮವ್ಯಾದಿ, ರಕ್ತ ಪರೀಕ್ಷಾ, ಮಾನಸಿಕ ಆರೋಗ್ಯ ಹಾಗೂ ದಂತ ಚಿಕಿತ್ಸಾಗಳನ್ನು ಹೊಂದಿದೆ.

ಸಾರ್ವಜನಿಕ ಆಸ್ಪತ್ರೆ (ಗೋಕಾಕ):  ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಯು ಜಿಲ್ಲೆಯ ಅತಿ ಹಳೆಯದಾದ  ಆಸ್ಪತ್ರೆಯಾಗಿದ್ದು, ಇದು 1865 ರಲ್ಲಿ ಪ್ರಾರಂಭಗೊಂಡಿದೆ. 1966 ರಲ್ಲಿ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣವಾಗಿದ್ದು, 75 ಹಾಸಿಗೆಯ ಸೌಲಭ್ಯವನ್ನು ಹೊಂದಿದೆ.

ಕರ್ನಾಟಕ ಆರೋಗ್ಯಧಾಮ (ಘಟಪ್ರಭಾ):  ಆಸ್ಪತ್ರೆಯು 1935 ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 195 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹರಡಿದೆ. 1985ರಲ್ಲಿ ಆಸ್ಪತ್ರೆಯು  ಸುಸಜ್ಜಿತಗೊಂಡು 166 ಹಾಸಿಗೆಯ ಸಾಮರ್ಥ್ಯಕ್ಕೆ ವಿಸ್ತರಣೆಗೊಂಡಿದೆ. ಪ್ರಸೂತಿ ವಿಭಾಗವು 55 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಗ್ರಾಮೀಣ ಭಾಗದಲ್ಲಿ 06 ಉಪಕೇಂದ್ರಗಳು  ಕಾರ್ಯನಿರ್ವಹಿಸುತ್ತವೆ.

ಸಾರ್ವಜನಿಕ ಆಸ್ಪತ್ರೆ (ಸವದತ್ತಿ):  ಆಸ್ಪತ್ರೆಯು 1875 ರಲ್ಲಿ ಪ್ರಾರಂಭಗೊಂಡು 1958 ರಿಂದ ಸ್ವಂತ ಕಟ್ಟಡದಲ್ಲಿ  ಕಾರ್ಯನಿರ್ವಹಿಸುತ್ತಿದೆ.  ಆಸ್ಪತ್ರೆಯು 10 ವಿಶೇಷ ಕ್ಷಯರೋಗ  ರೋಗಿಗಳಿಗೆ ಹಾಸಿಗೆ ಸೌಲಭ್ಯದೊಂದಿಗೆ ಒಟ್ಟಾರೆ 50 ಹಾಸಿಗೆ ಸೌಲಭ್ಯವನ್ನು ಹೊಂದಿದೆ.

ಸಾರ್ವಜನಿಕ ಆಸ್ಪತ್ರೆ (ಚಿಕ್ಕೋಡಿ): ಸಾರ್ವಜನಿಕ ಆಸ್ಪತ್ರೆಯು 1882 ರಲ್ಲಿ ಸ್ಥಳೀಯ ಮಂಡಳಿಯಿಂದ ಬಾಡಿಗೆ ಕಟ್ಟಡದಲ್ಲಿ ಆರಂಭಿಗೊಂಡು ಪ್ರಸ್ತುತ 50 ಹಾಸಿಗೆಯ ಸೌಲಭ್ಯದೊಂದಿಗೆ  ಆಧುನೀಕರಣಗೊಂಡಿದೆ.

ಜಿಲ್ಲಾ ಕ್ಷಯರೋಗ ಕೇಂದ್ರ ಬೆಳಗಾವಿ:ಜಿಲ್ಲಾ ಕ್ಷಯರೋಗ ಕೇಂದ್ರವು 1972 ರಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರಂಭಗೊಂಡಿದ್ದು, ಪ್ರಯೋಗಾಲಯ  ಹಾಗೂ ಎಕ್ಸರೇ ಘಟಕಗಳ ಸೌಲಭ್ಯವನ್ನು ಹೊಂದಿದೆ.

ಮಹಾತ್ಮಾಗಾಂಧಿ ಆಸ್ಪತ್ರೆ (ನಿಪ್ಪಾಣಿ-ಚಿಕ್ಕೋಡಿ): ಮಹಾತ್ಮಾಗಾಂಧಿ ಆಸ್ಪತ್ರೆಯು 1958ರಲ್ಲಿ ಪ್ರಾರಂಭಗೊಂಡಿದ್ದು, 10 ಹಾಸಿಗೆಯ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ 04 ಹಾಸಿಗೆಯನ್ನು ಪ್ರಸೂತಿ ವಿಭಾಗಕ್ಕೆ ಮೀಸಲಿಡಲಾಗಿದೆ. ಇದನ್ನು ನಗರ ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಂಯೋಜಿಸಲಾಗಿದೆ.

ನೌಕರರ ರಾಜ್ಯ ವಿಮಾ ಆಸ್ಪತ್ರೆ (ಬೆಳಗಾವಿ): ನೌಕರರ ರಾಜ್ಯ ವಿಮಾ ಕಾಯ್ದೆ 1948 ರನ್ವಯ ಬೆಳಗಾವಿ ಮಹಾನಗರ ಸಭೆ ವ್ಯಾಪ್ತಿಯಲ್ಲಿ ಆಸ್ಪತ್ರೆಯು 1963 ರಲ್ಲಿ ಸ್ಥಾಪನೆಗೊಂಡಿದೆ. ಬೆಳಗಾವಿಯಲ್ಲಿ 04 ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆಗಳನ್ನು ಹೊಂದಿದೆ. ಈ ಆಸ್ಪತ್ರೆಯ ಆಧುನಿಕ ಸೌಲಭ್ಯವನ್ನು ಒಳಗೊಂಡಿದೆ.

ವ್ಯಾಕ್ಸಿನ್ ಸಂಸ್ಥ ಬೆಳಗಾವಿ:  ವ್ಯಾಕ್ಸಿನ್ ಸಂಸ್ಥೆಯು 1904ರಲ್ಲಿ ವಿಶೇಷವಾಗಿ ಸಿಡುಬು ರೋಗ  ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಆರಂಭಗೊಂಡಿದ್ದು, ಸಂಸ್ಥೆಯು 1909 ರಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. 1954 ರಲ್ಲಿ  ಹಸು ಕರುವಿನ ಲಸಿಕೆಯಿಂದ ಕುರಿ ಲಸಿಕೆ ತಯಾರಿಸಲು ಬದಲಾವಣೆಗೊಂಡಿದೆ. 1956 ರಲ್ಲಿ ಆಡಳಿತವು ಕರ್ನಾಟಕ ಸರ್ಕಾರದ ಸುಪರ್ದಿಗೆ ವರ್ಗಾವಣೆಗೊಂಡಿದೆ.

ಮಿಷನ್ ಆಸ್ಪತ್ರೆ (ಸಂಕೇಶ್ವರ): ಮಿಷನ್ ಆಸ್ಪತ್ರೆಯು 1923 ರಲ್ಲಿ ಡಾ|| ಜಿ.ಹೆಂಡರಸನ್ ರವರಿಂದ ನಿರ್ಮಾಣಗೊಂಡಿರುತ್ತದೆ. ಆಸ್ಪತ್ರೆಯು ಎಕ್ಸರೇ ಘಟಕ, ಪ್ರಯೋಗಾಲಯ, ,ಶಸ್ತ್ರ ಚಿಕಿತ್ಸಾ ವಿಭಾಗ ಹಾಗೂ ಪ್ರಸೂತಿ ವಿಭಾಗವನ್ನು ಹೊಂದಿದೆ. ಪ್ರಸ್ತುತ  ಆಸ್ಪತ್ರೆಯು 50 ಹಾಸಿಗೆ ಸೌಲಭ್ಯವನ್ನು ರೋಗಿಗಳಿಗೆ ಒದಗಿಸುತ್ತಿದೆ ಅಲ್ಲದೇ 10 ಹಾಸಿಗೆಯ ಕ್ಷಯರೋಗ ವಿಭಾಗವನ್ನು ಹೊಂದಿದೆ.

ಕುಷ್ಠ ರೋಗ ಆಸ್ಪತ್ರೆ ಹಿಂಡಲಗಾ (ಬೆಳಗಾವಿ): ಕುಷ್ಠರೋಗ ಆಸ್ಪತ್ರೆಯು 1912 ರಲ್ಲಿ ಡಾ|| ಇ.ವಿ.ಹಂಟರ ರವರಿಂದ ಆರಂಭಗೊಂಡು 1924 ರಿಂದ ಕುಷ್ಠರೋಗಿಗಳಿಗೆ ವಿಶೇಷ ಉಪಚಾರ ನೀಡುವ ನಿಟ್ಟಿನಲ್ಲಿ  ಕಾರ್ಯನಿರ್ವಹಿಸುತ್ತಿದೆ.

ಇವುಗಳಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆರ್ಯುವೇದಿಕ, ಹೋಮಿಯೋಪಥಿಕ, ಆಸ್ಪತ್ರೆಗಳನ್ನು ಹೊಂದಿದ್ದು, ಉತ್ತಮ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಬೆಳಗಾವಿಯ ಸುತ್ತಮುತ್ತಲಿನ ಜನತೆಗೆ ಒದಗಿಸುತ್ತಿವೆ.

Best Viewed in latest version of firefox,chrome, Internet Explorer 9 or above with resolution 1024x768.