ವೈದ್ಯಕೀಯ ಕಾಲೇಜುಗಳು

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಬೆಳಗಾವಿ ಸಿವಿಲ್ ಆಸ್ಪತ್ರೆಯ ಕಾಂಪೌಂಡನಲ್ಲಿದೆ. ಈ ಸಂಸ್ಥೆಯು 2005 ರಲ್ಲಿ ಸ್ಥಾಪಿಸಲಾಯಿತು. ಕಾಲೇಜು ಕಟ್ಟಡ ಪ್ರದೇಶವು 12,712 ಚದರ ಅಡಿ ಆವರಿಸಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
(ಸ್ವಾಯತ್ತ ವೈದ್ಯಕೀಯ ಸಂಸ್ಥೆ, ಕರ್ನಾಟಕ ಸರ್ಕಾರ)
ಡಾ ಬಿ.ಆರ್ ಅಂಬೇಡ್ಕರ್ ರಸ್ತೆ, ಬೆಳಗಾವಿ– 590 001
ದೂ.ಸಂ. 0831-2403126 ಫ್ಯಾಕ್ಸ. 0831-2403126
ವೆಬ್ಸೈಟ್: www[dot]karunadu[dot]gov[dot]in/bims     www[dot]bimsbelgaum[dot]org
ವಿ.ಅಂಚೆ:  belgaum[dot]bims[at]gmail.com

ಜವಾಹರಲಾಲ ನೆಹರು ಮೆಡಿಕಲ್ ಕಾಲೇಜು (ಬೆಳಗಾವಿ ):

ಜೆ.ಎನ್.ಎಂ.ಸಿ ಇದು 1963 ರಲ್ಲಿ ಸ್ಥಾಪನೆಯಾಗಿದ್ದು, ದಕ್ಷಿಣ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವಾಗಿದೆ. ಇದು ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಅಧೀನದಲ್ಲಿ ಬರುತ್ತದೆ. ಈ ಕಾಲೇಜು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇವರಿಂದ ಅನುಮೋದಿಸಲ್ಪಟ್ಟಿರುತ್ತದೆ. ಇಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಹೊರಗಡೆ ದೇಶಗಳ ವಿದ್ಯಾರ್ಥಿಗಳು ಅಂದರೆ ಯುಎಸ್‍ಎ, ಯುಕೆ, ಮಲೇಷಿಯಾ ಇನ್ನಿತರೆ ದೇಶಗಳ ವಿದ್ಯಾರ್ಥಿಗಳೂ ವೈದ್ಯಕೀಯ ಶಿಕ್ಷಣ ಅಭ್ಯಸಿಸುತ್ತಾರೆ. ಈ ಯುನಿವರ್ಸಿಟಿಯು ಬೆಳಗಾವಿ ನಗರ ಪ್ರದೆಶದಿಂದ 3 ಕೀ.ಮೀ. ಅಂತರದಲ್ಲಿದೆ. ದೇಶದ ಕೆಲವೊಂದು ಮೆಡಿಕಲ್ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯದ ನೇರ ಆಡಳಿತದಲ್ಲಿ ಬರುವ ಕಾಲೇಜುಗಳಲ್ಲಿ ಇದು ಒಂದು ಎಂಬುದು ಈ ಕಾಲೇಜಿನ ಇನ್ನೊಂದು ವಿಶೇಷತೆ.

ಈ ಕೆಳಕಂಡ ಕೋರ್ಸುಗಳನ್ನು ಇಲ್ಲಿ ನಡೆಸಲಾಗುತ್ತದೆ. ಬಿ.ಎಸ್‍ಸಿ, ಎಂಬಿಬಿಎಸ್, ಬ್ಯಾಚಲರ್ ಆಫ್ ಫಿಸಿಯೋಥೆರಪಿ, ಪೋಸ್ಟ್ ಗ್ರಾಜುಯೇಟಿ ಕೋರ್ಸ್ – ಎಂ.ಡಿ, ಎಂ.ಎಸ್, ಎಂ.ಎಸ್‍ಸಿ ಹೊಸ್ಪಿಟಲ್ ಮ್ಯಾನೇಜಮೇಟ್, ಇತ್ಯಾದಿ. ಇಲ್ಲಿನ ಎಂ.ಬಿ.ಬಿ.ಎಸ್. ಡಿಗ್ರಿಗೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಇವರಿಂದ ಅನುಮೋದಿಸಲ್ಪಟ್ಟಿದೆ. ಕಾಲೇಜು, ಹಾಸ್ಟೆಲ್, ಸಿಬ್ಬಂದಿ ಕ್ವಾಟ್ರಸ್ ಎಲ್ಲವೂ ಕ್ಯಾಂಪಸ್‍ನಲ್ಲಿದೆ. ಈ ಕಾಲೇಜಿನ ಡಿಜಿಟಲ್ ಗ್ರಂಥಾಲಯ ದೇಶದ ಮೊಟ್ಟಮೊದಲ ಗ್ರಂಥಾಲಯವಾಗಿದೆ. ಇಲ್ಲಿನ ಶಿಕ್ಷಕ ಸಿಬ್ಬಂದಿಗೆ ಆಗಾಗ ವರ್ಕ್‍ಶಾಪ್‍ಗಳನ್ನು, ಕಾಲೇಜಿಗೆ ಭೇಟಿ ಮಾಡುವ ಗಣ್ಯರಿಗೆ ಸಿಲ್ವರ್ ಜುಬಲಿ ಗೆಸ್ಟ್ ಹೌಸ್‍ಗಳ ಸೌಲಭ್ಯ ಹಾಗೂ ಇನ್ನಿತೆ 8 ಹಾಸ್ಟೆಲ್‍ಗಳ ಸೌಲಭ್ಯ ಈ ಕಾಲೇಜಿನ ಕ್ಯಾಂಪಸ್‍ನಲ್ಲಿದೆ.
ಇಲ್ಲಿ ಎಂ.ಬಿ.ಬಿ.ಎಸ್. ಕೋರ್ಸ್‍ಗೆ ಅವಕಾಶ ವಿದ್ದು ಇದು 4 ವರ್ಷ 6 ತಿಂಗಳ ಕಾಲಾವಧಿ ಹೊಂದಿರುತ್ತದೆ. ಪೋಸ್ಟ ಗ್ರಾಜುಯೇಟ್ ಗಳಿಗೆ ಸಂಶೋಧನಾ ಕಾರ್ಯದ ಎಲ್ಲ ಸೌಕರ್ಯಗಳು ಹಾಗೂ ಆಸ್ಪತ್ರೆಗಳು ಹತ್ತಿರವಾಗಿದೆ. ಮೊದಲನೇ ವರ್ಷದಲ್ಲಿ ಪ್ರತಿವರ್ಷ ಸುಮಾರು 150 ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶ ದೊರೆಯುತ್ತದೆ.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪ್ರಾಂಶುಪಾಲರು
ಜವಾಹರಲಾಲ ನೆಹರು ಮೆಡಿಕಲ್ ಕಾಲೇಜ್, ಬೆಳಗಾವಿ -
ದೂ.ಸಂ-0831-2471350
Fax : 091 - 831 – 2470759.
Email : domejnmc[at]sancharnet[dot]in, jnmc[at]sancharnet[dot]in
Website : http://www[dot]jnmc[dot]edu

 

ಎ.ಎಂ. ಶೇಖ ಹೋಮಿಯೋಪೆಥಿಕ ಮೆಡಿಕಲ್ ಕಾಲೇಜು (ಬೆಳಗಾವಿ)

ಈ ಕಾಲೇಜು ಜರ್ಮನಿ ಟಿ.ಯು.ಇ, ಮ್ಯಾನೇಜ್‍ಮೆಂಟ್ ಸರ್ವಿಸಸ್ (GmbH) ಇವರಿಂದ ISO 9000 ಮಾನ್ಯತೆ ಪಡೆದ ದೇಶದ ಮೊಟ್ಟ ಮೊದಲ ಕಾಲೇಜು ಇದಾಗಿದೆ. ಈ ಕಾಲೇಜು ಡಾ| ಎಂ.ಎಸ್.ಶೇಖರ್ ರವರ ಕೊಡುಗೆ ಆಗಿದೆ. ಅಲ್ಲದೇ ಈ ಕಾಲೇಜು NAAC (National Accrediation and Advancement Council) ಇವರಿಂದ ಮಾನ್ಯತೆ ಪಡೆದಿದೆ.

ದೇಶದ ಮೂಲೆ ಮೂಲೆಯಿಂದ ಹೋಮಿಯೋಪೆಥಿ ಡಿಗ್ರಿ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಈ ಕಾಲೇಜನ್ನು ಹುಡುಕಿಕೊಂಡು ಬರುತ್ತಾರೆ. ಈ ಕಾಲೇಜು ಎಲ್ಲ ಬಿ.ಎಚ್.ಎಂ.ಎಸ್. ವಿದ್ಯಾರ್ಥಿಗಳಿಗೆ ಹೋಮಿಯೋಪೆಥಿಕ ಔಷಧೀಯ ಪದ್ದತಿ ಜೊತೆಗೆ 125 ಹಾಸಿಗೆ ಉಳ್ಳ ಆಸ್ಪತ್ರೆಯಲ್ಲಿ ಡೈಗ್ನೋಸ್ಟಿಕ್ ಮತ್ತು ಶಸ್ತ್ರಚಿಕಿತ್ಸೆಗೆ ಅವಶ್ಯಕವಾದಂತಹ ರೇಡಿಯೋಲಾಜಿ, ಫಿಜಿಯೋಥೆರಪಿ, ಎಂಡೋಸ್ಕೊಪಿ, ಆಫ್ಥಲ್ಮೊಲಾಜ (ನೇತ್ರವಿಜ್ಞಾನ), ಇತ್ಯಾದಿ ಶಿಕ್ಷಣ ನೀಡಲಾಗುತ್ತಿದೆ. ಚಿಕಿತ್ಸಾ ವಿಧಾನಕ್ಕೆ ಸಂಬಂಧಿಸಿದಂತೆ ಫಾರ್ಮಾಕಾಲಜಿ ಹಾಗೂ ಹೋಮಿಯೋಪಥಿ ನಡುವೆ ವಿಭಿನ್ನ ರೀತಿಯ ವ್ಯತ್ಯಾಸವಿರುತ್ತದೆ. ಹೋಮಿಯೋಪಥಿಯ ವಿವಿಧ (ಕ್ಷೇತ್ರ) ವಿಭಾಗಗಳಲ್ಲಿ ನೈಪುಣ್ಯತೆ ಪಡೆದ ಬೋಧಕ ಸಿಬ್ಬಂದಿಗಳ ಜೊತೆಗೆ, ಕನಿಷ್ಟ್ 10 ಜನ ಎಂ.ಬಿ.ಬಿ.ಎಸ್. ಪದವಿಯನ್ನು ಹೊಂದಿದ ಉಪನ್ಯಾಸಕರು ಬೋಧಕ ವೃಂದದ ಭಾಗವಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ,
ಎ.ಎಂ.ಶೇಖ ಹೋಮಿಯೋಪೆಥಿಕ ಮೆಡಿಕಲ್ ಕಾಲೇಜ್
ನೆಹರು ನಗರ, ಬೆಳಗಾವಿ. 590010,
Ph.: 0831-473253, 470486
E-Mail : amshaikh[at]satyam[dot]net[dot]in
Website: www.[dot]shaikhhomeo[dot]org

 

 

Best Viewed in latest version of firefox,chrome, Internet Explorer 9 or above with resolution 1024x768.