ಆರೋಗ್ಯ ಸೌಲಭ್ಯಗಳು

ಬೆಳಗಾವಿ ಜಿಲ್ಲೆಯು ವರದಾನದಂತಿರುವ ಅತ್ಯುತ್ತಮ ಆರೋಗ್ಯ ಸಂಸ್ಥೆಗಳನ್ನು ಹೊಂದಿದ್ದು ಈ ಆರೋಗ್ಯ ಸಂಸ್ಥೆಗಳು ಬೆಳಗಾವಿ ಜಿಲ್ಲೆಯ ಜನತೆಗಷ್ಟೆ ಅಲ್ಲದೆ ರಾಜ್ಯದ ಎಲ್ಲ ಭಾಗದ ಹಾಗೂ ಹೊರರಾಜ್ಯದ ಜನತೆಗೂ ಆರೋಗ್ಯ ಸೇವೆಯನ್ನು ಒದಗಿಸುತ್ತಿವೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರಯು ಎಷ್ಯಾದಲ್ಲಿಯೇ ಎರಡನೇಯ ಅತಿ ದೊಡ್ಡ ಆಸ್ಪತ್ರೆಯಾಗಿದ್ದು ಇಲ್ಲಿ ಎಲ್ಲ ತರಹದ ಅಧುನಿಕ ಸೌಲಭ್ಯಗಳು ಹಾಗೂ ಚಿಕಿತ್ಸೆಗಳು ಲಭ್ಯವಿರುತ್ತವೆ ಇತ್ತೀಚಿಗೆ ಕ್ಯಾನ್ಸರ್ ಸಂಶೋಧನಾ ಕೇಂದ್ರವು ಸ್ಥಾಪನೆಯಾಗಿದ್ದು ಇದರಿಂದಾಗಿ ರೋಗಿಗಳ ಉತ್ತಮ ಸೇವೆಗೆ ನೆರವಾಗಿದೆ ಅಲ್ಲದೇ ನಗರದಲ್ಲಿರುವ ಎ.ಎಮ್.ಶೇಖ ಹೋಮೀಯೋಪತಿ ಹಾಗೂ ವೈದ್ಯಕೀಯ ಕಾಲೇಜಿನ ಆರೋಗ್ಯ ಸೇವೆಯು ದೇಶದಲ್ಲಿಯೇ ಮೂರನೇ ಕ್ರಮಾಂಕದಲ್ಲಿದೆ ಇದಲ್ಲದೆ ನಗರದಲ್ಲಿಯ ಪ್ರಸಿದ್ದ ವೈದ್ಯರು ಹಾಗೂ ಇನ್ನಿತರ ಆರೋಗ್ಯ ಸಂಸ್ಥೆಗಳು ಉತ್ತಮ ಆರೋಗ್ಯ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದ್ದು ಬೆಳಗಾವಿಯನ್ನು ಆರೋಗ್ಯವಂತ ನಗರವನ್ನಾಗಿಸಿದೆ.

 

ಪ್ರಮುಖ ಆರೋಗ್ಯ ಸೌಲಭ್ಯ ಕೇಂದ್ರಗಳು

1) ಕೆ.ಎಲ್.ಇ.ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ.

2) ಕೆ.ಎಲ್.ಇ. ಸಂಸ್ಥೆಯ ವಿಶ್ವನಾಥ ಕತ್ತಿ ದಂತ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ

3) ಕಾನ್ಸರ ಆಸ್ಪತ್ರೆ – ಬೆಳಗಾವಿ

4) ಇನ್ನಿತರ ಆರೋಗ್ಯ ಸಂಸ್ಥೆಗಳು

 

Best Viewed in latest version of firefox,chrome, Internet Explorer 9 or above with resolution 1024x768.