ಕೈಗಾರಿಕೆಗಳು:

ಬೆಳಗಾವಿಯು ಔದ್ಯೋಗಿಕ ಪ್ರಗತಿಯಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿದ್ದು, ಕೈಗಾರಿಕೆ ಒಲವು ಹೊಂದಿದೆ. ಬೆಳಗಾವಿ ಔದ್ಯೋಗಿಕ ವಲಯವು ಬಂಡವಾಳ ಹೂಡಿಕೆಗೆ ಸೂಕ್ತಕರವಾಗಿದ್ದು, ಕೈಗಾರಿಕೆಯಲ್ಲಿ ಅತಿ ವೇಗದ ಬೆಳವಣಿಗೆ ಹೊಂದುತ್ತಿರುವ   ಕರ್ನಾಟಕ ರಾಜ್ಯದ ವಾಯುವ್ಯ ದಿಕ್ಕಿನಲ್ಲಿರುವ ನಗರವಾಗಿದೆ. ಬೆಳಗಾವಿಯಲ್ಲಿ ಬೃಹತ್  ಕೈಗಾರಿಕೆಗಳು ನಿರ್ಮಾಣವಾಗಿದ್ದು, ಇವುಗಳಲ್ಲಿ ಇಂಡಾಲ ಅಲ್ಯೂಮಿನಿಯಂ ಕಂಪನಿ. ಹಾಗೂ ಪಾಲಿ ಹೈಡ್ರಾನ ಕೈಗಾರಿಕೆಗಳು ಪ್ರಮುಖವಾದವು. ಬೆಳಗಾವಿ ನಗರವು ಆಹಾರ ಉತ್ಪನ್ನಗಳಾದ ಸಕ್ಕರೆ, ಹತ್ತಿ, ತಂಬಾಕು, ಎಣ್ಣೆ ಬೀಜಗಳು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಪ್ರಸಿದ್ದಿಯಾಗಿದೆ. ಅಲ್ಲದೇ ಚರ್ಮೊಧ್ಯಮ , ಕುಂಬಾರಿಕೆ, ಸೋಪು, ಹತ್ತಿ, ಹಾಗೂ ಬೆಲೆಬಾಳುವ ಲೋಹದ ಉತ್ಪಾದನೆಯ ಕೈಗಾರಿಕೆಗಳು ಇಲ್ಲಿ ನೆಲೆಗೊಂಡಿವೆ. ಬೆಳಗಾವಿ  ನಗರವು ವಿದ್ಯುತ್ ಮಗ್ಗ ಕೈಗಾರಿಕೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ಹಲವಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಹೈಡ್ರಾಲಿಕ ಯಂತ್ರ ತಯಾರಿಕಾ ಘಟಕವು ಬೆಳಗಾವಿ ನಗರದ ವಿಶೇಷ ಕೈಗಾರಿಕೆಯಾಗಿದೆ. ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಎಲ್ಲ ಸ್ತರದ ಜನತೆಗೆ ಮಹತ್ವದ ಕೈಗಾರಿಕಾ ಹಾಗೂ ವ್ಯಾಪಾರ ಸ್ಥಳವಾಗಿ ಹೊರಹೊಮ್ಮಿದೆ.

ಬೆಳಗಾವಿ ಹಾಗೂ ಸುತ್ತಮುತ್ತಲಿನ ವಿವಿಧ ಕೈಗಾರಿಕೆಗಳು:

1) ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ (ಬೆಳಗಾವಿ)

2) ದೂಧಗಂಗಾ ಸಕ್ಕರೆ ಕಾರ್ಖಾನೆ (ಚಿಕ್ಕೋಡಿ)

3) ಇಂಡಾಲ್ ಅಲ್ಯುಮಿನಿಯಲ್ ಕಂಪನಿ ಲಿಮಿಟೆಡ್ – ಇಂಡಾಲ (ಬೆಳಗಾವಿ)

4) ಹೀರಾ ಶುಗರ್ ಫ್ಯಾಕ್ಟರಿ, ಸಂಕೇಶ್ವರ (ಹುಕ್ಕೇರಿ)

5) ಶ್ರೀ ಭಾಗ್ಯಲಕ್ಷ್ಮಿ ಶುಗರ್ ಫ್ಯಾಕ್ಟರ್ (ಖಾನಾಪುರ)

6) ಇತರೆ

 

Best Viewed in latest version of firefox,chrome, Internet Explorer 9 or above with resolution 1024x768.